
ಕೊಪ್ಪ ಪಟ್ಟಣ ಪಂಚಾಯಿತಿ ವತಿಯಿಂದ ವಾರ್ಡ್ ನಂಬರ್ 5ರಲ್ಲಿ ಇಂದು ಪಟ್ಟಣ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳು ವಾರ್ಡ್ ನ ಮನೆ ಮನೆಗೆ ತೆರಳಿ ಡೆಸ್ಟ್ ಬಿನ್ ವಿತರಿಸಿದರು. ಇತ್ತೀಚಿಗೆ ನಡೆದ ಸಾಮಾನ್ಯ ಸಭೆಯಲ್ಲಿ ಹಸಿಕಸ ಹಾಗೂ ಒಣ ಕಸ ಬೇರ್ಪಡಿಸಲು ಬಂದ ಡೆಸ್ಟ್ ಬಿನ್ ಗೋಡನ್ ನಲ್ಲಿ ಸ್ಟಾಕ್ ಇದ್ದರೂ ಏಕೆ ಮನೆಗಳಿಗೆ ವಿತರಣೆಯಾಗಿಲ್ಲ ಎಂದು ಪಟ್ಟಣ ಪಂಚಾಯತಿಯ ನಾಮಿನಿ ಸದಸ್ಯ ಸಂದೇಶ್ ರವರು ಸಭೆಯಲ್ಲಿ ಪ್ರಶ್ನಿಸಿದ್ದರು

ಅದಕ್ಕೆ ಮುಖ್ಯ ಅಧಿಕಾರಿಗಳಾದ ಚಂದ್ರಕಾಂತ್ ರವರು ಉತ್ತರಿಸಿ ಈಗ ಇರುವ ಡೆಸ್ಟ್ ಬಿನ್ ಗಳು ಪಟ್ಟಣದ ಸಂಪೂರ್ಣ ಮನೆಗಳಿಗೆ ಹಂಚಲು ಸಾಧ್ಯವಾಗುವುದಿಲ್ಲ ಈಗಾಗಲೇ ಡಸ್ಟ್ ಬಿನ್ ಗಳಿಗೆ ಆರ್ಡರ್ ನೀಡಿದ್ದು ಅದು ಬಂದ ಕೂಡಲೇ ಪಟ್ಟಣದ ಮನೆ ಮನೆಗೆ ಹಂಚಲಾಗುವುದು ಎಂದಿದ್ದರು ಅದರಂತೆಯೇ ಈಗ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಿಗೆ ಡೆಸ್ಟ್ ಬಿನ್ ವಿತರಣೆಯಾಗುತ್ತಿದ್ದು ಅದರಂತೆಯೇ ಈ ದಿನ 5ನೇ ವಾರ್ಡ್ ನಲ್ಲಿ ಇಸ್ಮಾಯಿಲ್ ರವರ ನೇತೃತ್ವದಲ್ಲಿ ಡೆಸ್ಟ್ ಬಿನ್ ಹಂಚಲಾಯಿತು.

Leave a Reply