
ಕೊಪ್ಪದಲ್ಲಿ ಮಾರ್ಚ್ 10 ರ ಸೋಮವಾರ ದಂದುಕೊಪ್ಪ ತಾಲ್ಲೂಕು ಒಕ್ಕಲಿಗರ ಮಹಿಳಾ ಸಂಘ (ರಿ.)ಇದರ ವತಿಯಿಂದ ಎಂ.ಎಸ್. ದ್ಯಾವೇಗೌಡ ಸ್ಮಾರಕ ಒಕ್ಕಲಿಗರ ಸಮುದಾಯ ಭವನ ಬಾಳಗಡಿ ಯಲ್ಲಿ ಅತ್ಯಂತ ವಿಜೃಂಭಣೆ ಯಿಂದ ಮಹಿಳಾ ದಿನಾಚರಣೆ ಆಚರಣೆ ನಡೆಯಿತು.ಶ್ರೀಮತಿ ಶ್ರೀನಿಧಿ ದಿನೇಶ್ ಇವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮ ಜನಮನಸೂರೆಗೊಂಡಿತ್ತು.

ಮುಖ್ಯ ಅತಿಥಿಗಳಾಗಿಶ್ರೀಮತಿ ಸುಜಾತ ನಾಗರಾಜ್ ಎಂ.ಕೆ.ಓರಿಯೆಂಟಲ್ ಇನ್ಸೂರೆನ್ಸ್ ಆಫೀಸರ್, ಬೆಂಗಳೂರು,ಶ್ರೀಮತಿ ಶೃತಿ ಮಿತ್ರ, ಗೌರವ ಕಾರ್ಯದರ್ಶಿ,ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ವಾಣಿ ಸತೀಶ್, ಸಹಕಾರ್ಯದರ್ಶಿಗಳಾದ ಶ್ರೀಮತಿ ಸುಧಾ ಅಶೋಕ್,ಖಜಾಂಜಿಗಳಾದ ಶ್ರೀಮತಿ ವೀಣಾ ಉಮೇಶ್ ಸೇರಿದಂತೆ ನಿರ್ದೇಶಕರುಗಳಾದ ಶ್ರೀಮತಿ ರತ್ನಮ್ಮ ಹಾಲಪ್ಪ ಹೆಗ್ಡೆ,ಶ್ರೀಮತಿ ಸತ್ಯವತಿ ಅಶೋಕ್,ಶ್ರೀಮತಿ ಸುನಂದ ಮಹೇಶ್,ಶ್ರೀಮತಿ ಗೀತಾ
ನಾಗೇಶ್,ಶ್ರೀಮತಿ ಶಶಿರೇಖಾ ಅರುಣ್,ಶ್ರೀಮತಿ ಮಧುರ ಈಶ್ವರ್,ಶ್ರೀಮತಿ ಕವಿತ ಶ್ರೀಕಾಂತ್, ಶ್ರೀಮತಿ ಶಿಲ್ಪ ಅರುಣ್, ಶ್ರೀಮತಿ ಶ್ವೇತಾ ನಾರಾಯಣ್,ಶ್ರೀಮತಿ ಅನ್ವಿತ ಪೃಥ್ವಿರಾಜ್ ಅವರ ತಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು. ಅದರಲ್ಲೂ ವಿಷಯ ವಾಗಿ ಸುಜಾತ ನಾಗರಾಜ್ ಅವರು ಹೆಣ್ಣು ಮಕ್ಕಳು ಹೇಗೆ ಬದುಕ

ಬೇಕು, ಜೀವನ ಹೇಗೆ ರೂಪಿಸಿ ಕೊಳ್ಳ ಬೇಕು, ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು, ಸಮಾಜದಲ್ಲಿ ಎದುರಗುವ ಅವಮಾನ, ಅಪಮಾನ ವನ್ನು ಹೇಗೆ ಎದುರಿಸಿದರೆ ಸನ್ಮಾನ ಬರುತ್ತದೆ ಎಂಬ ಸಂಗತಿಯನ್ನು ಎಳೆ ಎಳೆ ಯಾಗಿ ಸಭೆಯ ಮುಂದಿಟ್ಟರು.ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಶ್ರೀನಿಧಿ ದಿನೇಶ್ ಮಾತನಾಡಿ ಹೆಣ್ಣು ಈ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಶೋಷಣೆಗೆ ಪ್ರತಿನಿತ್ಯ ಒಳಗಾಗುತ್ತಿದ್ದಾಳೆ, ಹೆಣ್ಣು ಮಕ್ಕಳಿಗೆ ಉತ್ತಮ ವಾದ ವಿದ್ಯಾಭ್ಯಾಸ ಕೊಡುವ ಜವಾಬ್ದಾರಿ ಪೋಷಕರದ್ದು,ಇತ್ತೀಚಿನ ಕಾಲಘಟ್ಟದಲ್ಲಿ ಪುರುಷರಿಗೆ ಸರಿ ಸಮಾನಾಗಿ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾಳೆ ಆದರೆ ಅದರ ಪ್ರಮಾಣ ಹೆಚ್ಚಾಗಬೇಕಿದೆ ಎಂದರು ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರ ಫ್ಯಾಶನ್ ಶೋ, ಗ್ರೂಪ್ ಡ್ಯಾನ್ಸ್, ಸೋಲೋ ಡ್ಯಾನ್ಸ್, ಹಾಗೂ ಸ್ಕಿಟ್‌ಗಳನ್ನು ಮಾಡಲಾಯಿತು.
Leave a Reply