
ಕೊಪ್ಪ ತಾಲ್ಲೂಕು ಅಂದಗಾರು ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಅಂದಗಾರು ಪ್ರೀಮಿಯಂ ಲೀಗ್ ತಂಡದವರು ದಿನಾಂಕ 8/3/25 ನೆ ಶನಿವಾರ ನೆಡೆಸಿದ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಯನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಓಣಿತೋಟ ರತ್ನಾಕರ್ ರವರು ಉದ್ಘಾಟಿಸಿದರು. ಗ್ರಾಮದ ಎಲ್ಲಾ ಕಾರ್ಮಿಕರು ಸೇರಿ ನಡೆಸುತ್ತಿರುವ ಈ ಕ್ರೀಡಾಕೂಟದಲ್ಲಿ ಮೊದಲ ಬಹುಮಾನ 40000/- ಹಾಗೂ ಆಕರ್ಷಕ ಟ್ರೋಫಿ ಎರಡನೇ ಬಹುಮಾನ 20000/- ಹಾಗೂ ಆಕರ್ಷಿಕ ಟ್ರೋಫಿ ಇಡಲಾಗಿತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಶೃಂಗೇರಿ ಶಾರದಾ ಮಠದಿಂದ ತರಲಾಗಿತ್ತು.ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಾ ಶಿಕ್ಷಕರಾದ ಸುಜಾತ ಅಂಗನವಾಡಿ ಶಿಕ್ಷಕರು ಹಾಗೂ ದೇವೇಂದ್ರ ಅಂದಗಾರು, ಸುರೇಶ, ಕಾರ್ತಿಕ್, ಪ್ರೇಮಿಯಂ ಲೀಗ್ ನ ತಂಡದ ಸದ್ಯಸರು ಮತ್ತು ಗ್ರಾಮಸ್ಥರು ಇದ್ದರು.


Leave a Reply