Advertisement

ಮನುಜ ಮತದಿಂದ ಮಾತ್ರ ಜಗತ್ತಿನಲ್ಲಿಸಾಮರಸ್ಯ ಸಾಧ್ಯ – ಚಿಂತಕಿ ಡಾ.ಎಲ್.ಜಿ.ಮೀರಾ

ಕುಪ್ಪಳಿಯಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ರಾಜ್ಯ ಮಟ್ಟದ “ನಾನೂ ನಾಯಕಿ” ತರಬೇತಿಯ ಮನುಜ ಮತ ಗೋಷ್ಠಿಯಲ್ಲಿ ಸಂವಿಧಾನ ತಾಯಿ ಇದ್ದಂತೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಹೇಳುವ ಮೂಲಕ ಮನದ ಮನ್ವಂತರ ಗೋಷ್ಠಿಯಲ್ಲಿ ಮಾತನಾಡಿದರು.ಮನುಷ್ಯ ಮನುಷ್ಯರ ನಡುವೆ ಮಾನವೀಯ ಸಂಬಂಧಗಳು ಗಟ್ಟಿಯಾಗಬೇಕು ಎಂದು ಚಿಂತಕಿ ಡಾಕ್ಟರ್ ಎಲ್. ಜಿ. ಮೀರಾ ಹೇಳಿದರು. ಅವರು ಇಲ್ಲಿನ ಹೇಮಾಂಗಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಹಾಗೂ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ಮತ್ತು ಮಾನವ ಬಂಧುತ್ವ ವೇದಿಕೆ ಕರ್ನಾಟಕ ಕುವೆಂಪು ಪ್ರತಿಷ್ಠಾನ ಇವುಗಳ ಸಹಯೋಗದೊಂದಿಗೆ ಆಯೋಜಿಸಿದ್ದ ರಾಜ್ಯಮಟ್ಟದ ನಾನು ನಾಯಕಿ ತರಬೇತಿಯ ಮನುಜ ಮತ ಗೋಷ್ಠಿಯಲ್ಲಿ ಮಾತನಾಡಿ ವಿಶ್ವಕವಿ ಕುವೆಂಪು ಅವರು ಮನುಜ ಮತವನ್ನು ಸಾರಿದ ದಾರ್ಶನಿಕರಾಗಿದ್ದಾರೆ,ಅಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸುವಂತಾಗಬೇಕು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ಅವರು ತಮ್ಮ ತಮ್ಮ ಮನೆಗಳಲ್ಲಿ ಉತ್ತಮ ಸಂಸ್ಕಾರವನ್ನು ನೀಡುವ ಕೆಲಸ ಆಗಬೇಕಾಗಿದೆ ಮಹಿಳೆ ಕೇವಲ ಮನೆಗೆ ಸೀಮಿತವಾಗದೆ ಸಾಮಾಜಿಕ ಕಳಕಳಿಯನ್ನು ಹೊಂದುವ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಬೇಕಾಗಿದೆ

ಇಂತಹ ಸ್ಥಳದಲ್ಲಿ ಕುವೆಂಪು ಮಣ್ಣಿನ ನೆಲದ ಮೂಲಕ ಬಹುದೊಡ್ಡ ಸಂದೇಶವನ್ನು ಸಾರುವ ಇಂತಹ ನಾಯಕತ್ವ ಶಿಬಿರಗಳು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಮಹಿಳೆ ತನ್ನ ಸ್ವಾರ್ಥದ ಆಚೆಗೆ ವಿಶ್ವ ಚೇತನವನ್ನು ಮೂಡಿಸುವ ಮನುಜ ಮತ ಹಾದಿಯಲ್ಲಿ ಸಾಗುವ ಕಾರ್ಯಕ್ಕೆ ಮುನ್ನುಡಿಯಾಗಬೇಕು ಎಂದರು. ಖ್ಯಾತ ವಕೀಲರಾದ ಸುಧೀರ್ ಕುಮಾರ್ ಮುನ್ನೊಳ್ಳಿಯವರು ಮನದ ಮನ್ವಂತರ ವಿಷಯದ ಮೇಲೆ ಮಾತನಾಡಿ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಇಂತಹ ಸಂವಿಧಾನ ದೇಶಕ್ಕೆ ತಾಯಿ ಇದ್ದಂತೆ ಸಂವಿಧಾನ ಇಲ್ಲ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ನಾವಿಂದು ಸ್ವತಂತ್ರವಾಗಿ ಬದುಕುವ ವ್ಯವಸ್ಥೆ ಇಂದು ಬಂದಿದೆ ಎಂದರೆ ಅದು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಆಗಿದೆ ಸಂವಿಧಾನಕ್ಕೆ ನಾವು ಮೊದಲ ಆದ್ಯತೆಯನ್ನು ನೀಡಬೇಕಾಗಿದೆ ಇಂದು ಮೌಡ್ಯದ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ ನಿಜವಾದ ಬದುಕುವುದು ನಮ್ಮೊಳಗೆ ನಮ್ಮ ಮನಸೇ ನಮಗೆ ದೇವರು ಎಂದು ಹೇಳಿದ ಕುವೆಂಪು ಅಜ್ಜನಂತಹ ಈ ಕ್ಷೇತ್ರದಲ್ಲಿ ನಮ್ಮ ಮನಸ್ಸುಗಳ ಮನ್ವಂತರ ಆಗಬೇಕಾಗಿದೆ ಧಾರ್ಮಿಕವಾಗಿ ನಮ್ಮ ಮನಸ್ಸುಗಳನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಲೇ ಬಂದಿದೆ ಆದರೆ ನಿಜವಾಗಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರೋದು ನಮ್ಮ ಮನಸ್ಸು ಹೃದಯವಂತಿಕೆಯನ್ನು, ಆದರ್ಶ ಗುಣಗಳನ್ನು ಹೇಳುವುದರಿಂದಾಗದು ಅವುಗಳನ್ನು ಪಾಲಿಸುವ ಕೆಲಸ ಆಗಬೇಕಾಗಿದೆ ಬಸವಣ್ಣನಂತಹ ಮಹಾನ್ ದಾರ್ಶನಿಕ ಈ ಜಗತ್ತಿಗೆ ಭಾರದಿದ್ದಲ್ಲಿ ನಮ್ಮ ಮನುಜ ಮತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗದು ಹಾಗಾಗಿ ಪ್ರತಿಯೊಬ್ಬರೂ ನಮ್ಮೊಳಗೆ ನಮ್ಮನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಬೇಕಾಗಿದೆ ಆ ನಿಟ್ಟಿನಲ್ಲಿ ಪರಿಷತ್ತು ತನ್ನ ನಿರಂತರವಾದ ಕಾರ್ಯ ಚಟುವಟಿಕೆಗಳನ್ನು ಜನರಲ್ಲಿ ಜಾಗೃತಿ ಉಂಟು ಮಾಡುವ ಕೆಲಸ ಶ್ಲಾಗನೀಯ ಎಂದರು. ಖ್ಯಾತ ವೈದ್ಯರಾದ ಡಾ. ಬಿ. ಕೆ. ಸೌಮ್ಯಮಣಿ ಮಹಿಳೆ ಎಂದರೆ ಎನ್ನುವ ವಿಷಯದ ಬಗ್ಗೆ ಮಾತನಾಡುತ್ತ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಮೌಢ್ಯಕ್ಕೆ ಶರಣಾಗುತ್ತಿರುವುದನ್ನ ಕಾಣುತ್ತಿದ್ದೇವೆ ಅದರಿಂದ ಹೊರ ಬಂದಾಗ ಮಾತ್ರ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಹಿರಿಯ ಪತ್ರಕರ್ತ ಜಿನೇಶ್ ಇರ್ವತ್ತೂರು ಮಾತನಾಡಿ ಪ್ರತಿಯೊಬ್ಬರಲ್ಲೂ ಮನಕ್ಕೆ ಚೈತನ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದರು.ಮಸೀದಿಗಳ ಬಿಟ್ಟು ಹೊರಬನ್ನಿ ಎನ್ನುವ ವಿಷಯದ ಮೇಲೆ ಡಾ. ಹುಲಿಕಲ್ ನಟರಾಜ್ ಮಾತನಾಡುತ್ತ ನಾವು ಇಂದು ಎತ್ತ ಸಾಗುತ್ತಿದ್ದೇವೆ ಎನ್ನುವ ಅರಿವಿಲ್ಲದೆ ಮೌಢ್ಯಕ್ಕೆ ಶರಣಾಗುತ್ತಿರುವುದು ವಿಷಾದನೀಯ ನಮ್ಮ ಮನಸ್ಸುಗಳಲ್ಲಿ ಜಾಗೃತಿಯನ್ನು ನೋಡಿಸುವ ನಿಟ್ಟಿನಲ್ಲಿ ನಮ್ಮ ಜೀವನವನ್ನು ಸುಧಾರಿಸಿಕೊಳ್ಳಬೇಕಾಗುತ್ತದೆ ಮೋಸ ಮಾಡುವವರಿಗಿಂತ ಮೋಸ ಹೋಗುವುದು ದೊಡ್ಡ ಅಪಾಯ ಎಂದರಲ್ಲದೆ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಟಿ. ಸ್ವಾಮಿ ಕಟ್ಟುವೆವು ನಾವು ಎನ್ನುವ ವಿಷಯದ ಕುರಿತು ಮಾತನಾಡಿ ಪ್ರತಿಯೊಬ್ಬರು ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕು ಈ ಮೂಲಕ ನಾಡು ದೇಶ ಜಗತ್ತು ಕಟ್ಟಲು ಸಾಧ್ಯ ಎಂದರಲ್ಲದೆ ಕೆಲವು ಸಂಸ್ಥೆಗಳು ಇಂತಹ ಕಟ್ಟುವ ಕೆಲಸದಲ್ಲಿ ಪ್ರಮುಖ ಪಾತ್ರವಹಿಸುವೆ, ಅದರಲ್ಲಿ ವೈಜ್ಞಾನಿಕ ಪರಿಷತ್ತು ಮುಂಚೂಣಿಯಲ್ಲಿದೆ ಎನ್ನುವುದು ಅಭಿನಂದನಿಯ ಸಂಗತಿಯಾಗಿದೆ ಎಂದವರು ತಿಳಿಸಿದರು. ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಇತ್ತ ಕುಪ್ಪಳ್ಳಿಯ ಹೇಮಂಗಣದಲ್ಲಿ ದೀಪಗಳ ಬೆಳಕು ಪ್ರಜ್ವಲಿಸುತ್ತಿತ್ತು ಭಾಗವಹಿಸಿದ ಪ್ರತಿಯೊಬ್ಬ ಮಹಿಳೆಯು ಹಣತೆಯನ್ನು ಹಚ್ಚಿಕೊಳ್ಳುವ ಮೂಲಕ ಹೊಸ ಮನ್ಮಂತರಕ್ಕೆ ಸಾಕ್ಷಿಯಾಗಿತ್ತು ಅದೇ ವೇದಿಕೆಯಲ್ಲಿ ಏಕತಾರಿ ನಾದಮಣಿ ಅವರ ದೀಪದಿಂದ ದೀಪವ ಹಚ್ಚಬೇಕು ಮಾನವ ಗೀತೆ ಪ್ರತಿಯೊಬ್ಬರ ಮನ ಹೃದಯಕ್ಕೆ ಇಳಿದಿತ್ತು ಹಾಗೆಯೇ ಕುವೆಂಪುರವರ ಓ ನನ್ನ ಚೇತನ ಆಗು ನೀ ಅನಿಕೇತನ ಗೀತೆಗೆ ಎಲ್ಲರೂ ಮೌನವಾದ ಹಾಗೂ ಮನ ಮಿಡಿಯುವ ಮನ ಅರಿಯುವ ಕಾರ್ಯಕ್ರಮವಾಗಿತ್ತು.ಲೇಖನ :ಬಿ. ಡಿ. ರವಿ ಆನಂದ ಪುರ.

Leave a Reply

Your email address will not be published. Required fields are marked *