Advertisement

ಧರ್ಮಸ್ಥಳ ಗೌಡ್ರು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ಸಮ್ಮಿರ್ ಗೆ ಜೀವಬೆದರಿಕೆ ಹಿಂದೂ ವಿರೋಧಿ ಪಟ್ಟ

ಕಳೆದ 13 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಏನ್ನೆಲ್ಲ ನಡೆದಿದೆ ಎಂಬುದು ರಾಜ್ಯದ ಜನತೆಗೆ ತಿಳಿದಿರುವ ವಿಚಾರ. ಮಹೇಶ್ ತಿಮ್ಮರೋಡ್ಡಿ,ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಅನೇಕ ನಾಯಕರ ಮುಂದಾಳತ್ವದಲ್ಲಿ ಸೌಜನ್ಯ ಕೊಲೆಗೆ ನ್ಯಾಯ ಕೊಡಿ ಎಂದು ನೂರಾರು ಪ್ರತಿಭಟನೆಗಳು ನಡೆದಿವೆ ನಡೆಯುತ್ತಿವೆ ಈ ವಿಚಾರದಲ್ಲಿ ಹಲವು ಯುಟ್ಯೂಬ್ ಸುದ್ದಿವಾಹಿನಿಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಬಿತ್ತರವಾಗಿವೆ. ಆದರೆ ಇತ್ತೀಚೆಗೆ ಸಮ್ಮಿರ್ ಎಂಬ ಯುಟ್ಯೂಬರ್ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಳೆ ಎಳೆಯಾಗಿ ಬಿಚ್ಚಿಟ್ಟ ಸುದ್ದಿ ಇದೀಗ ರಾಜ್ಯದ ಮನೆ ಮನೆ ತಲುಪಿದ್ದು ಸಾರ್ವಜನಿಕ ಪ್ರಶಂಸೆ ಪಡೆಯುವುದರೊಂದಿಗೆ ಸಮ್ಮಿರ್ ಒಬ್ಬ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಭಾರಿ ಕಸರತ್ತು ನಡೆಯುತ್ತಿದೆ.

ಆದರೆ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸಮ್ಮಿರ್ ಒಬ್ಬ ಮುಸ್ಲಿಂ ಹಾಗೂ ಸೌಜನ್ಯ ಒಬ್ಬ ಹಿಂದೂ ಎಂದು ಜಾತಿ-ಧರ್ಮವನ್ನು ಎಳೆದು ತರುವುದಕ್ಕಿಂತ ಸಮ್ಮಿರ್ ರವರು ಮಾತನಾಡಿರುವ ವಿಷಯ ಯಾವುದು ಹಾಗೂ ಸೌಜನ್ಯ ಅತ್ಯಾಚಾರ ಕೊಲೆ ಆಗಿದೆ ಸಂತೋಷ್ ಎಂಬ ವ್ಯಕ್ತಿ 12 ವರ್ಷಗಳ ಕಾಲ ತಾನು ಮಾಡದ ತಪ್ಪಿಗೆ ಜೈಲಿನಲ್ಲಿ ಕುಳಿತು ನಿರಪರಾಧಿ ಎಂದು ಸಾಬೀತಾದ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಾಗಾದರೆ ಸೌಜನ್ಯ ಕೊಲೆ ಮಾಡಿದ್ದಾದರೂ ಯಾರು? ಹೀಗೊಂದು ಪ್ರಶ್ನೆ ಸಾರ್ವಜನಿಕರಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ ಆ ಪ್ರಶ್ನೆಯನ್ನು ಹಾಗೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿಯಾನ್ನು ಬಿತ್ತರಿಸಿದ್ದ ಸಮ್ಮಿರ್ ವಿರುದ್ಧ ಪೋಲಿಸ್ ಇಲಾಖೆ ತರಾತುರಿಯಲ್ಲಿ ಸುಮೊಟೊ ಕೇಸು ದಾಖಲಿಸಿಕೊಂಡು ಜೈಲಿಗಟ್ಟುವ ಕಾರ್ಯಕ್ಕೆ ಮುಂದಾಗಿತ್ತು ಆದರೆ ನ್ಯಾಯಾಲಯ ಯಾವುದೇ ಕಾರಣಕ್ಕೂ ಸಮ್ಮಿರ್ ರವರನ್ನು ಅರೆಸ್ಟ್ ಮಾಡುವ ಹಾಗಿಲ್ಲ ಪೊಲೀಸ್ ಠಾಣೆಗೂ ಕರೆಸುವಂತಿಲ್ಲ ಎಂದು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ಪ್ರಕರಣದ ದಾರಿ ತಪ್ಪಿಸಲು ಕೆಲವು ಕಾಣದ ಕೈಗಳು ಆತ ಒಬ್ಬ ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಂತಿದೆ. ನಮ್ಮ ಈ ನಾಗರಿಕ ಸಮಾಜದಲ್ಲಿ ಕೆಲವರಿಗೆ ಇದೊಂದು ಚಾಳಿಯಾಗಿಬಿಟ್ಟಿದೆ ಪ್ರಕರಣವನ್ನು ಪ್ರಕರಣವನ್ನಾಗಿ ನೋಡದೆ ಆತನ ಜಾತಿ-ಧರ್ಮದ ಆಧಾರದಲ್ಲಿ ಆ ಪ್ರಕರಣದ ಹಾದಿಯ ದಿಕ್ಕು ತಪ್ಪಿಸುವ ಕೆಲಸ ಈ ಹಿಂದಿನಿಂದಲೂ ನಡೆದಿದೆ ಇಂದು ನಡೆಯುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಇತ್ತೀಚಿಗೆ ಸೈಯದ್ ಎಂಬ ವ್ಯಕ್ತಿ ಪಟ್ಟಣದ ಪುರಾತನ ದೇವಾಲಯ ಸುಮಾರು 400 ವರ್ಷಕ್ಕಿಂತಲೂ ಹಳೆಯ ಶ್ರೀ ಮಹಾಸತಿ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಜೆಸಿಬಿ ಮುಖಾಂತರ ದೊಡ್ಡ ದೊಡ್ಡ ಕಂದಕಗಳನ್ನು ಮಾಡುವ ಮೂಲಕ ದೇವಸ್ಥಾನ ಹಾಗೂ ಜಮೀನಿಗೆ ತೆರಳುವ ದಾರಿಯನ್ನೇ ಮತ್ತು ಆತನ ಒಡಹುಟ್ಟಿದ ಅಕ್ಕನ ಮನೆಗೆ ನೀರು ಹಾಗೂ ದಾರಿಯನ್ನು ಕಟ್ ಮಾಡುತ್ತಾನೆ ತದನಂತರ ಊರಿನ ಮುಖಂಡರು ಹಾಗೂ ತಾಲೂಕಿನ ದಂಡಾಧಿಕಾರಿಗಳ ಮಾರ್ಗದರ್ಶನದಲ್ಲಿ ರಸ್ತೆ ಪುನಃ ನಿರ್ಮಾಣವಾಗುತ್ತದೆ.

ಈ ಪ್ರಕರಣದಲ್ಲೂ ಸಹ ಹಿಂದೂ-ಮುಸ್ಲಿಂ ಆತ ಹಿಂದೂ ವಿರೋಧಿ ಈತ ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಕೆಲವು ಕಾಣದ ಕೈಗಳು ಮುಂದಾದವು ಆದರೆ ಪ್ರಜ್ಞಾವಂತ ನಾಗರಿಕರು ಯಾರೋ ಹೇಳಿದ ಮಾತ್ರಕ್ಕೆ ಅದನ್ನು ನಂಬದೇ ಸ್ಥಳ ವೀಕ್ಷಣೆ ಮಾಡಿ ಪ್ರಕರಣದ ಮೂಲವನ್ನು ಅರಿತು ಮಾತನಾಡುವುದು ಸೂಕ್ತ ಯಾರೇ ತಪ್ಪು ಮಾಡಿದರೂ ತಪ್ಪೇ ಅದನ್ನು ಜಾತಿ ಆಧಾರದಲ್ಲಿ ಅಳೆಯುವುದು ತುಲನೆ ಮಾಡುವುದು ಈ ನಾಗರಿಕ ಸಮಾಜಕ್ಕೆ, ಸೌಹಾರ್ದತೆಗೆ ಭಂಗ ತರುವ ಸಂಗತಿಯಾಗುತ್ತದೆ ಆದ್ದರಿಂದ ಇದೀಗ ಸುದ್ದಿಯಲ್ಲಿರುವ ಸಮ್ಮಿರ್ ಪರವಾಗಿ ಪ್ರತಿಯೊಬ್ಬರು ನಿಲ್ಲಬೇಕಾಗುತ್ತದೆ ಇಲ್ಲವಾದಲ್ಲಿ ಸತ್ಯ ಹೇಳುವ ಧ್ವನಿಗಳುನ್ನು ಹತ್ತಿಕ್ಕುವ ಕಾಣದ ಕೈಗಳ ಕುತಂತ್ರಕ್ಕೆ ಸತ್ಯ ಸಾಯುತ್ತದೆ ಸುಳ್ಳು ರಾರಾಜಿಸುತ್ತದೆ.

Leave a Reply

Your email address will not be published. Required fields are marked *