
ಚಿಕ್ಕಮಗಳೂರು ಜಿಲ್ಲಾ ವಿಧಾನ ಪರಿಷತ್ ಚುನಾವಣೆಯ ಮರು ಎಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗಾಯತ್ರಿ ಶಾಂತೆ ಗೌಡರ ಗೆಲುವಿಗಾಗಿ ಕೊಪ್ಪದ ವೀರಭದ್ರ ದೇವಸ್ಥಾನದಲ್ಲಿ ಕೊಪ್ಪ ತಾಲೋಕು ಮುಖಂಡರಾದ ಪ್ರಸನ್ನ ಶೆಟ್ಟಿ ಹಾಗೂ ಕಾಂಗ್ರೆಸ್ ಮುಖಂಡರಾದ ಓಣಿತೋಟ ರತ್ನಾಕರ್ ಹಾಗೂ ಸಂಗಡಿಗರು ವಿಶೇಷ ಪೂಜೆ ನಡೆಸಿದರು.

ಈ ಬಾರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂ.ಕೆ ಪ್ರಾಣೇಶ್ ಹಾಗೂ ಗಾಯತ್ರಿ ಶಾಂತೆ ಗೌಡರ ನಡುವೆ ನಡೆದ ಹಣ ಹಣಿಯಲ್ಲಿ 6 ಮತಗಳ ಅಂತರ ದಿಂದ ಎಂ.ಕೆ ಪ್ರಾಣೇಶ್ ರವರು ಗೆಲುವು ಸಾಧಿಸಿದ್ದರು ಆದರೆ ಪಟ್ಟಣ ಪಂಚಾಯಿತಿ ನಾಮಿನಿ ಸದಸ್ಯರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು ಅವರಿಗೆ ಮತದಾನದ ಹಕ್ಕು ಇರಲಿಲ್ಲ ಎಂದು ಗಾಯತ್ರಿ ಶಾಂತೆ ಗೌಡರು ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಮರು ಎಣಿಕೆಗೆ ಆದೇಶ ನೀಡಿತ್ತು ಇದೀಗ ಮರು ಎಣಿಕೆ ನಡೆದಿದ್ದು ಚುನಾವಣಾ ಆಯೋಗ ಅದರ ಸಂಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ ಇನ್ನೇನು ಕೆಲವೇ ದಿನದಲ್ಲಿ ತೀರ್ಪು ಹೊರಬರಲಿದ್ದು ಒಟ್ಟಾರೆ ಎಲ್ಲೆಡೆ ಗಾಯತ್ರಿ ಶಾಂತೆ ಗೌಡರ ಅಭಿಮಾನಿಗಳು ಅವರ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ.

Leave a Reply